
ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಧರ್ಮದ ಅಸಮಾನತೆ, ಶೋಷಣೆ ಮತ್ತು ಅಮಾನವೀಯ ಆಚರಣೆಗಳನ್ನು ಯಾವ ರೀತಿ ವಿಶ್ಲೇಷಿಸಿದ್ದಾರೆಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಜಗತ್ತಿನ ಅತಿದೊಡ್ಡ ಧರ್ಮಗಳಲ್ಲೊಂದಾದ ಹಿಂದೂ ಧರ್ಮವು, ವಾಸ್ತವದಲ್ಲಿ ಚಾತುರ್ವರ್ಣ ವ್ಯವಸ್ಥೆ ಮತ್ತು ಜಾತಿ ಪದ್ಧತಿಯ ಮೂಲಕ ತಳಸಮುದಾಯಗಳನ್ನು ಹೇಗೆ ಶೋಷಿಸಿದೆ ಎಂಬುದನ್ನು ಐತಿಹಾಸಿಕ ಮತ್ತು ವೈಚಾರಿಕ ಹಿನ್ನೆಲೆಯಲ್ಲಿ ವಿವರಿಸಲಾಗಿದೆ. ಮನುಸ್ಮೃತಿ ಮತ್ತು ಭಗವದ್ಗೀತೆಯಂತಹ ಗ್ರಂಥಗಳು ಅಸಮಾನತೆಯನ್ನು ಹೇಗೆ ಪೋಷಿಸಿವೆ ಎಂಬುದನ್ನು ಖಂಡಿಸುವ ಅಂಬೇಡ್ಕರ್, ಶೂದ್ರರು ಮತ್ತು ಅಸ್ಪೃಶ್ಯರ ವಿಮೋಚನೆಗಾಗಿ ನಡೆಸಿದ ಬೌದ್ಧಿಕ ಹೋರಾಟವನ್ನು ಕಟ್ಟಿಕೊಡಲಾಗಿದೆ. ಬ್ರಾಹ್ಮಣಶಾಹಿಯ ಸ್ವಾರ್ಥ ಮತ್ತು ಮೌಢ್ಯತೆಯ ವಿರುದ್ಧ ಸಿಡಿದೆದ್ದ ಅವರು, ಮಾನವೀಯ ಮೌಲ್ಯಗಳ ಪರವಾಗಿ ನಿಂತ ಬಗೆಯನ್ನು ವಿಶ್ಲೇಷಿಸಲಾಗಿದೆ. ‘ನಾನು ಹಿಂದುವಾಗಿ ಸಾಯುವುದಿಲ್ಲ’ ಎಂಬ ಐತಿಹಾಸಿಕ ನಿರ್ಧಾರ ಹಾಗೂ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ ಅವರ ತಾತ್ವಿಕ ಪಯಣದ ಮೇಲೆ ಬೆಳಕು ಚೆಲ್ಲಲಾಗಿದೆ.
ಚಾತುರ್ವರ್ಣ ವ್ಯವಸ್ಥೆ, ಸಮಾನತೆ ಮತ್ತು ಬೌದ್ಧ ಧರ್ಮ, ಡಾ. ಬಿ.ಆರ್. ಅಂಬೇಡ್ಕರ್, ಅಸ್ಪೃಶ್ಯತೆ ಮತ್ತು ಶೋಷಣೆ, ಹಿಂದೂ ಧರ್ಮದ ವಿಮರ್ಶೆ
ಚಾತುರ್ವರ್ಣ ವ್ಯವಸ್ಥೆ, ಸಮಾನತೆ ಮತ್ತು ಬೌದ್ಧ ಧರ್ಮ, ಡಾ. ಬಿ.ಆರ್. ಅಂಬೇಡ್ಕರ್, ಅಸ್ಪೃಶ್ಯತೆ ಮತ್ತು ಶೋಷಣೆ, ಹಿಂದೂ ಧರ್ಮದ ವಿಮರ್ಶೆ
| selected citations These citations are derived from selected sources. This is an alternative to the "Influence" indicator, which also reflects the overall/total impact of an article in the research community at large, based on the underlying citation network (diachronically). | 0 | |
| popularity This indicator reflects the "current" impact/attention (the "hype") of an article in the research community at large, based on the underlying citation network. | Average | |
| influence This indicator reflects the overall/total impact of an article in the research community at large, based on the underlying citation network (diachronically). | Average | |
| impulse This indicator reflects the initial momentum of an article directly after its publication, based on the underlying citation network. | Average |
