
ಆಧುನಿಕ ಯುಗದಲ್ಲೂ ಶರಣರ ಜಾಡನ್ನು ಹಿಡಿದು 20ನೇ ಶತಮಾನದಲ್ಲಿ ಆಧುನಿಕ ಕನ್ನಡ ವಿದ್ವಾಂಸರು ಪ್ರಸ್ತುತ ಸಮಾಜವನ್ನು ತಿದ್ದುವ ಪ್ರಯತ್ನದಲ್ಲಿ ತಮ್ಮದೇ ಆದ ವಿಚಾರಗಳನ್ನು ವಚನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆಧುನಿಕ ವಚನಗಳು ಯಾರ ಹಂಗಿಲ್ಲದೆ, ನೇರವಾಗಿ, ಕಿರಿದಾಗಿ ಹೇಳುವ ಸಾಮರ್ಥ್ಯ ಪಡೆದಿವೆ. ಅಂದಿನ ನಡುಗನ್ನಡ ವಚನಕಾರರಂತೆ ಇಂದಿನ ಹೊಸಗನ್ನಡ ವಚನಕಾರರು ತಮ್ಮ ವಚನದ ಕೊನೆಗೆ ಅಂಕಿತನಾಮವಾಗಿ ತಮ್ಮದೇ ನಾಮಧೇಯ, ಇಷ್ಟದೈವ ಅಥವಾ ಇನ್ಯಾವುದೋ ಕುರುಹನ್ನು ಬಳಸಿಕೊಂಡಿರುವುದುಂಟು. ಇಬ್ಬರ ಆಶಯಗಳು ಜನಮುಖಿ ಮತ್ತು ಜೀವನಮುಖಿಯಾಗಿವೆ. ಸಮಾಜ ಪರಿವರ್ತನೆಗೆ ಬೇಕಾಗುವ ಗುಣಗಳಲ್ಲಿ ಸಮೃದ್ಧವಾಗಿ ಕಂಡುಬರುವ ದೈವೀಶ್ರದ್ಧೆ, ಶ್ರಮದ ದುಡಿಮೆ, ಗುಣದೋಷಗಳ ವಿಮರ್ಶೆ, ಆತ್ಮನಿರೀಕ್ಷೆ, ಜೀವನ ಪ್ರೀತಿ, ಉಪಕಾರ ಸ್ಮರಣೆ, ನಿಸರ್ಗ ನಂಬಿಕೆ, ಪ್ರಾಮಾಣಿಕತೆ, ವಿಚಾರಶೀಲತೆ, ಮನೋವೈಶಾಲ್ಯತೆ, ಸಭ್ಯತೆ ಇತ್ಯಾದಿ ಅಂಶಗಳನ್ನು ವಚನಗಳಲ್ಲಿ ಕಾಣುತ್ತೇವೆ.
ಶಿವಶರಣರು, ಆಧುನಿಕ ವಚನಗಳು, ಅಂಕಿತನಾಮ, ಸಮಾಜ ಪರಿವರ್ತನೆ, ಘಾತುಕ, ಆತ್ಮಸಾಕ್ಷಿ
ಶಿವಶರಣರು, ಆಧುನಿಕ ವಚನಗಳು, ಅಂಕಿತನಾಮ, ಸಮಾಜ ಪರಿವರ್ತನೆ, ಘಾತುಕ, ಆತ್ಮಸಾಕ್ಷಿ
| selected citations These citations are derived from selected sources. This is an alternative to the "Influence" indicator, which also reflects the overall/total impact of an article in the research community at large, based on the underlying citation network (diachronically). | 0 | |
| popularity This indicator reflects the "current" impact/attention (the "hype") of an article in the research community at large, based on the underlying citation network. | Average | |
| influence This indicator reflects the overall/total impact of an article in the research community at large, based on the underlying citation network (diachronically). | Average | |
| impulse This indicator reflects the initial momentum of an article directly after its publication, based on the underlying citation network. | Average |
